ಗೋ ಸೇವೆಗೆ ಅವಕಾಶ

ಚಿತ್ರ ಭಂಡಾರ

ಸೇವೆ / ದೇಣಿಗೆ

ವಾರ್ಷಿಕ ಸಮಾರಂಭಗಳು

‘ಶರನ್ನವರಾತ್ರಿ’ಯಲ್ಲಿ ನವದುರ್ಗೆಯರಿಗೆ ಕಲ್ಪೋಕ್ತಪೂಜೆಯನ್ನು ಸಲ್ಲಿಸಲಾಗುವುದು. ಕನ್ನಿಕಾ ಪೂಜೆಯನ್ನು ನಡೆಸಲಾಗುವುದು. ಕೆಲವೊಮ್ಮೆ ’ಸೇವೆ’ ಯಾಗಿ ಬರುವ ಐವತ್ತು, ಅರವತ್ತು ಕನ್ನಿಕಾ ಪೂಜೆಗಳನ್ನು ನಡೆಸಬೇಕಾಗಿ ಬರುವುದು.

ಸಿಂಹಮಾಸದ ನಾಲ್ಕೈದು ಶುಕ್ರವಾರಗಳಂದು ಐವತ್ತು ಅರವತ್ತು ಸಾವಿರಗಳಷ್ಟೂ ಭಾವುಕರು ಬಂದು ದೇವಿಯ ದರ್ಶನ ಪಡೆಯುವರು. ಸೇವೆಯನ್ನು ಸಲ್ಲಿಸುವರು. ’ಕುಂಕುಮಾರ್ಚನೆ’  ’ಕಾರ್ತಿಕಪೂಜೆ’  ’ಕರ್ಪೂರ ಮಂಗಳಾರತಿ’ ಹಾಗೂ ’ಪಂಚಕಜ್ಜಾಯ ಸಮರ್ಪಣೆ’ – ಇವು ಹೆಚ್ಚಾಗಿ ಸಲ್ಲುವ ಸೇವೆಗಳು. ಹೂವಿನ ಪೂಜೆ, ದುರ್ಗಾಪೂಜೆ, ಚಂಡಿಕಾಹೋಮ  – ಇವು ಆಗಾಗ್ಯೆ ಇಲ್ಲಿ ನಡೆಯುತ್ತಿರುವ ವಿಶಿಷ್ಟ ಸೇವೆಗಳು.

ಮಾಘ ಶುದ್ಧ ತ್ರಯೋದಶಿಯಂದು ಧ್ವಜಾರೋಹಣ ನಡೆದು, ಹುಣ್ಣಿಮೆಯಂದು ರಥೋತ್ಸವ ಜರಗುವುದು. ಮುಂದಿನ ಅಮವಾಸ್ಯೆಯಂದು ’ರಾಶಿಪೂಜೆ’ ನಡೆಯುವುದು. ರಥೋತ್ಸವದಂದು ಮಧ್ಯಾಹ್ನ ನಡೆಯುವ ಮಹಾಸಂತರ್ಪಣೆಯಲ್ಲಿ ಸುಮಾರು ಮೂರುವರೆ ಸಾವಿರ ಭಾವುಕರು ಪಾಲ್ಗೊಂಡರೆ, ರಾತ್ರಿ ನಡೆಯುವ ಉತ್ಸವದಲ್ಲಿ ನಾಲ್ಕೈದು ಸಾವಿರ ಭಾವುಕರು ಭಾಗವಹಿಸುವರು.

ಯುಗಾದಿಯಂದು ’ಕಣಿ’ ಇಡಲಾಗುವುದು. ಬೆಳಗ್ಗೆ ಹತ್ತು ಗಂಟೆಗೆ ಸರಿಯಾಗಿ ‘ಪಂಚಾಂಗಶ್ರವಣ’ವನ್ನು ನಡೆಸಲಾಗುವುದು. ಗಣೇಶ ಚತುರ್ಥಿಯಂದು ಗಣಹೋಮ, ಕೃಷ್ಣಾಷ್ಟಮಿಯಂದು ಪ್ರತ್ಯೇಕಪೂಜೆ ನಡೆಯುವುದು. ಋಗುಪಾಕರ್ಮವನ್ನು ಆಚರಿಸಲಾಗುತ್ತಿದ್ದು. ಬೆಳ್ಳೆ, ಪಾಜೈ, ಬಿಳಿಯೂರು, ಸುಭಾಷ್‌ನಗರ ಮುಂತಾದ ಕಡೆಯ ಸುಮಾರು ನೂರು ಮಂದಿ ಸಾಧಕರು ಇದರಲ್ಲಿ ಪಾಲ್ಗೊಳ್ಳುವರು.

ಧನುರ್ಮಾಸದಲ್ಲಿ ಧನುರ್ಮಾಸಪೂಜೆಯನ್ನು, ಕಾರ್ತಿಕ ಮಾಸದಲ್ಲಿ ಪಶ್ಚಿಮಜಾಗರ ಪೂಜೆಯನ್ನೂ ನಡೆಸಲಾಗುವುದು.

ಧಾರ್ಮಿಕ ಆಚರಣೆಗಳು

News and Event Archives

January 2018
M T W T F S S
« May    
1234567
891011121314
15161718192021
22232425262728
293031  
Highslide for Wordpress Plugin