ಗೋ ಸೇವೆಗೆ ಅವಕಾಶ

ಚಿತ್ರ ಭಂಡಾರ

ಸೇವೆ / ದೇಣಿಗೆ

ಪ್ರತಿಮೆಯ ಸಂಕೇತ

ಕುಂಜಾರುಗಿರಿಯ ದುರ್ಗಾಲಯದಲ್ಲಿ ವಿರಾಜಮಾನಳಾದ ಯೋಗಮಾಯಾರೂಪದ ದುರ್ಗಾದೇವಿ ನಿಂತಿರುವ ಭಂಗಿಯ ಪ್ರತಿಮೆಯಲ್ಲಿ ಸನ್ನಿಹಿತಳಾಗಿದ್ದು, ‘ಶಿಷ್ಟರಿಗೆ ತೊಂದರೆ ಕೊಡುವ ದುಷ್ಟರನ್ನು ಸಂಹರಿಸಿ, ಶಿಷ್ಟರ ಇಷ್ಟಗಳನ್ನು ಪೂರೈಸುವುದರಲ್ಲಿ ತಾನು ಸದಾ ಸಿದ್ಧಳು’- ಎಂದು ಸಾರುತ್ತಿರುವಂತೆ ಕಾಣಿಸುವಳು. ಮೇಲಿನ ಎರಡು ಕೈಗಳಲ್ಲಿ ಧರಿಸಿರುವ ಶಂಖಚಕ್ರಗಳು ಶಿಷ್ಟರ ಇಷ್ಟಗಳ ಪೂರೈಕೆಯ ಸಂಕೇತವಾಗಿದ್ದರೆ, ಕೆಳಗಿನ ಎರಡೂ ಕೈಗಳಲ್ಲಿ ಧರಿಸಿರುವ ಬಿಲ್ಲು ಹಾಗೂ ತ್ರಿಶೂಲಗಳು ದುಷ್ಟ ಸಂಹಾರದ ಸಂಕೇತವಾಗಿದೆ. ಪಾದದಡಿಯಲ್ಲಿ ಬಿದ್ದಿರುವ ಮಹಿಷಾಸುರನ ಪ್ರತಿಮೆ ಇದಕ್ಕೆ ಪುಷ್ಟಿ ನೀಡುತ್ತದೆ. ಕೊಂಬುಗಳನ್ನು ಹೊಂದಿರುವ ಮಹಿಷಾಸುರ ಅಹಂಕಾರಕ್ಕೂ ಸಂಕೇತವೆನಿಸುತ್ತಿದ್ದು, ತಮೋಗುಣದ ಪರಿಣಾಮವಾಗಿ ಭಕ್ತರಲ್ಲೂ ಆಗಾಗ್ಗೆ ತಲೆದೋರಬಹುದಾದ ಅಹಂಕಾರವನ್ನು ಹತ್ತಿಕ್ಕಿ, ಭಕ್ತಿ, ಜ್ಞಾನಾದಿಗಳು ಸಮೃದ್ಧವಾಗುವಂತೆ ಮಾಡುವಲ್ಲಿಯೂ ಆಕೆಯ ಪಾತ್ರವನ್ನು ಆ  ಭಂಗಿ ಸೂಚಿಸುತ್ತದೆ. ಸೌಮ್ಯಭಾವದ ಮುಖದ ಕಳೆ ಅಸುರನ ಸಂಹಾರದ ಸಂದರ್ಭದಲ್ಲೂ ಕ್ರೋಧಕ್ಕೆ ಒಳಗಾಗದ ದೇವಿಯ ಪ್ರಕೃತ್ಯತೀತವಾದ ವ್ಯಕ್ತಿತ್ವವನ್ನು ಸಾರುತ್ತಿದೆ.

ಧಾರ್ಮಿಕ ಆಚರಣೆಗಳು

News and Event Archives

January 2018
M T W T F S S
« May    
1234567
891011121314
15161718192021
22232425262728
293031  
Highslide for Wordpress Plugin