ಗೋ ಸೇವೆಗೆ ಅವಕಾಶ

ಚಿತ್ರ ಭಂಡಾರ

ಸೇವೆ / ದೇಣಿಗೆ

ಪ್ರಶಾಂತ ವಾತವರಣ

ದುರ್ಗಾಬೆಟ್ಟದ ಸುತ್ತಲೂ ಹಬ್ಬಿ ನಿಂತಿರುವ ಹಸಿರಾದ ಕಾನನ. ಅದರ ಮಧ್ಯದ ದೇವಾಲಯದಲ್ಲಿ ಶೋಭಾಯಮಾನಳಾಗಿ ನಿಂತಿರುವ ದುರ್ಗೆ ‘ವನದುರ್ಗೆ’ – ಎಂದೆನಿಸುವಂತೆ ಮಾಡಿದೆ. ಹಿಂದೆ ಹುಲಿಗಳು ನೆಲೆಯಾಗಿದ್ದ ದಟ್ಟ ವನ ಈಗ ನವಿಲು, ನರಿ, ಕೋತಿಗಳಿಗಷ್ಟೇ ಆಶ್ರಯ ನೀಡುವಷ್ಟು ಸೊರಗಿ ಹೋಗಿದೆಯಾದರೂ ಪ್ರಶಾಂತ ವಾತಾವರಣವನ್ನು ಸೃಷ್ಟಿಸಿದೆ. ಸುತ್ತ ಬೆಳೆದ ಗಿಡಮರಗಳ ಹಚ್ಚಹಸುರು ಕಣ್ಣುಗಳಿಗೆ ಮುದವನ್ನೀಡುತ್ತಿದ್ದರೆ, ಆಗಾಗ್ಯೆ ಬೀಸುವ ತಂಗಾಳಿ ಮೈಮನಗಳಿಗೆ ತಂಪನ್ನೀಡುತ್ತದೆ. ಇದರಿಂದಾಗಿ ಅಂತಃಕರಣ ಪ್ರಶಾಂತವಾಗಿ ಒಳಮುಖವಾಗುತ್ತಿರುತ್ತದೆ.

ಭೂಮಟ್ಟಕ್ಕಿಂತ ಸುಮಾರು ೧೦೦ ಅಡಿಗಳಿಗಿಂತಲೂ ಎತ್ತರದಲ್ಲಿರುವ ಈ ದುರ್ಗಾಲಯದ ಹೊರಾಂಗಣ ಆಸುಪಾಸಿನ ಎಲ್ಲಾ ದೃಶ್ಯಗಳ ವಿಹಂಗಮ ನೋಟಕ್ಕೆ ಅನುವು ಮಾಡಿಕೊಡುವುದರ ಮೂಲಕ ದುರ್ಗಾದೇವಿಯ ಸನ್ನಿಧಾನದಿಂದಾಗಿ ಸಾಂಸಾರಿಕ ಪ್ರಪಂಚದಿಂದ ಸ್ವಲ್ಪ ಮೇಲಕ್ಕೇರಿದ ವಿನೂತನ ಅನುಭವ ತಂದುಕೊಡುವುದು.

ಸಂಧ್ಯಾಕಾಲದಲ್ಲಿ ಪಶ್ಚಿಮ ದಿಗಂತದಲ್ಲಿ ಸೂರ್ಯ ಮುಳುಗುವ ದೃಶ್ಯದ ಸೊಬಗನ್ನು ಸವಿಯುವ ಅಪೂರ್ವ ಅವಕಾಶ ಇಲ್ಲಿ ದೊರಕಬಲ್ಲುದು. ಆಗಸ ಮೇಘಾದಿಗಳಿಂದ ಕಲುಷಿತವಾಗದೆ ಶುಭ್ರವಾಗಿದ್ದಾಗ ಪಶ್ಚಿಮ ಸಮುದ್ರದ ತರಂಗಗಳೂ   ಇಲ್ಲಿ ಕಾಣಿಸುವವು.

ಹೀಗೆ ಪ್ರಕೃತಿ ಮಾತೆಯ ಅದ್ಭುತಗಳನ್ನು ಆಸ್ವಾದಿಸಲು  ಬೇಕಾದ ಎತ್ತರದ ದೊಡ್ಡಸ್ತಿಕೆ ದುರ್ಗಾಬೆಟ್ಟದಲ್ಲಿದೆ.

ಧಾರ್ಮಿಕ ಆಚರಣೆಗಳು

News and Event Archives

January 2018
M T W T F S S
« May    
1234567
891011121314
15161718192021
22232425262728
293031  
Highslide for Wordpress Plugin