ಗೋ ಸೇವೆಗೆ ಅವಕಾಶ

ಚಿತ್ರ ಭಂಡಾರ

ಸೇವೆ / ದೇಣಿಗೆ

ಪ್ರಾಚೀನ ಸಾಹಿತ್ಯದಲ್ಲಿ ಉಲ್ಲೇಖ

ಕುಂಜಾರುಗಿರಿಯ ಹಾಗೂ ಅದರಲ್ಲಿ ನೆಲೆಸಿರುವ ದುರ್ಗಾದೇವಿಯ ಉಲ್ಲೇಖ  ಶ್ರೀ ನಾರಾಯಣ ಪಂಡಿತಾಚಾರ್ಯರು ರಚಿಸಿರುವ ’ಸುಮಧ್ವವಿಜಯ’ದಲ್ಲಿಯೂ, ಶ್ರೀ ವಾದಿರಾಜ ತೀರ್ಥರು ನಿರ್ಮಿಸಿರುವ ’ತೀರ್ಥಪ್ರಬಂಧ’ ದಲ್ಲಿಯೂ ಬಂದಿದೆ.
ಸುಮಧ್ವಯ ವಿಜಯದಲ್ಲಿ (೨-೧೧) ಶ್ರೀ ಮಧ್ವಾಚಾರ್ಯರ ಅವತಾರ ಭೂಮಿಯಾದ ಪಾಜಕಕ್ಷೇತ್ರದ ವೈಶಿಷ್ಟ್ಯವನ್ನು ತಿಳಿಸುತ್ತ –  ’ವಿಮಾನಗಿರಿ’ ಎನಿಸುವ ದುರ್ಗಾಬೆಟ್ಟದಿಂದ ಶೋಭಿಸುತ್ತಿರುವಂತಹದ್ದು ಪಾಜಕ, ’ವಿಮಾನಗಿರಿ’ಯಾದರೂ ಶ್ರೀ ಕೃಷ್ಣನ ತಂಗಿಯಾದ ದುರ್ಗೆ ಎಂಬ ಶಿರೋನಾಮೆಯಿಂದ ವಿರಾಜಿಸುತ್ತಿದೆ. ಶ್ರೀ ಪರಶುರಾಮನೇ ದುರ್ಗೆಯನ್ನು  ದುರ್ಗಾಬೆಟ್ಟದಲ್ಲಿ ಪ್ರತಿಷ್ಠಾಪಿಸಿರುವನು ಎಂಬುದಾಗಿ ನಿರೂಪಿಸಲಾಗಿದೆ.
ತೀರ್ಥ ಪ್ರಬಂಧದಲ್ಲಿ (ಪಶ್ಚಿಮ ಪ್ರಬಂಧ -೧೭..೨೦) ದುರ್ಗಾಬೆಟ್ಟದ ಪಕ್ಕದಲ್ಲಿಯೇ ಇರುವ ಪಾಜಕದಲ್ಲಿ ಅವತರಿಸಿರುವ ಶ್ರೀ ಮಧ್ವಾಚಾರ್ಯರು ದುರ್ಗಾದೇವಿಯ ಸಾಕ್ಷಾತ್‌ಪುತ್ರರಾಗಿದ್ದು, ಅಂತಹ ಪುತ್ರನ ಮೇಲಿನ ಪ್ರೀತಿಯಿಂದಲೋ ಎಂಬಂತೆ ದುರ್ಗಾಬೆಟ್ಟದಲ್ಲಿ ದುರ್ಗಾದೇವಿ ಸದಾ ಸನ್ನಿಹಿತಳಾಗಿರುವಳೆಂದು ತಿಳಿಸಲಾಗಿದೆ. ಅಲ್ಲದೆ, ತ್ರಿಶೂಲ ಧಾರಿಣಿಯಾದ ದುರ್ಗಾದೇವಿ ಮಹಿಷಾಸುರನನ್ನು ಸಂಹರಿಸಿರುವಳು; ಸಜ್ಜನರಿಗೆ ಅವರವರ ಯೋಗ್ಯತಾನುಸಾರವಾಗಿ ಸ್ವರ್ಗ, ಮೋಕ್ಷ ಮುಂತಾದವುಗಳನ್ನು ಅನುಗ್ರಹಿಸುವವಳೆಂದು ಸ್ತುತಿಸಲಾಗಿದೆ. ದುರ್ಗಾದೇವಿಯು  ಚತುರ್ಮುಖನೇ ಮುಂತಾದ ದೇವತೆಗಳಿಂದಲೂ ಸಮಗ್ರವಾಗಿ ತಿಳಿಯಲ್ಪಡದವಳು. ದುರ್ಜನರಿಗೆ ದುಃಖವನ್ನು ನೀಡುವವಳು. ದುರ್ಜನರಿಂದ ಹೊಂದಲು ಅಸಾಧ್ಯಳಾದವಳು. ಸಜ್ಜನರಿಗೆ ಅಭಯದಾತೆಯಾಗಿರುವವಳು. ನಿಯಾಮಕಳಾಗಿ ಎಲ್ಲರ ಹೃದಯಗುಹೆಯಲ್ಲಿ ನೆಲೆಸಿರುವವಳು. ಈ ಎಲ್ಲ ಕಾರಣಗಳಿಂದಾಗಿ `ದುರ್ಗಾ’-ಎಂದು ಅನ್ವರ್ಥಕವಾಗಿ ಕರೆಸಿಕೊಳ್ಪಲ್ಪಡುವವಳು ನೀನು – ಎಂಬುದಾಗಿ ದುರ್ಗಾದೇವಿಯನ್ನು ಸಂಬೋಧಿಸಿ ನಿವೇದಿಸಿಕೊಳ್ಳಲಾಗಿದೆ.

ಧಾರ್ಮಿಕ ಆಚರಣೆಗಳು

News and Event Archives

January 2018
M T W T F S S
« May    
1234567
891011121314
15161718192021
22232425262728
293031  
Highslide for Wordpress Plugin