ಗೋ ಸೇವೆಗೆ ಅವಕಾಶ

ಚಿತ್ರ ಭಂಡಾರ

ಸೇವೆ / ದೇಣಿಗೆ

ಕೆಳಗಿನಿಂದ ನೀರು ಹೊರುವಿಕೆ

ಕೆಳಗಿನಿಂದ ನೀರು ಹೊರುವಿಕೆ

ಕುಂಜಾರುಬೆಟ್ಟದ ದುರ್ಗಾಲಯದ ವಠಾರದಲ್ಲಿ ಬಾವಿ ಇಲ್ಲ. ಈಗ ನಳ್ಳಿಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆಯಾದರೂ ದೇವಿಯ ಪೂಜೆ, ನೈವೇದ್ಯಾದಿಗಳಿಗೆ ನಲ್ಲಿ ನೀರನ್ನು ಬಳಸುವಂತಿಲ್ಲ. ಆದುದರಿಂದ ಕೆಳಗಿನ ಬಾಣತೀರ್ಥ ಹಾಗೂ ಗದಾತೀರ್ಥದಿಂದ ದುರ್ಗಾಲಯಕ್ಕೆ ನೀರನ್ನು ಹೊತ್ತು ತರಬೇಕು. ಸಾಮಾನ್ಯಕೊಡಕ್ಕಿಂತ ಸುಮಾರು ಎರಡೂವರೆಪಟ್ಟಿನಷ್ಟು ದೊಡ್ಡದಾದ ಕೊಡದಲ್ಲಿ ನಿರ್ಮಾಲ್ಯವಿಸರ್ಜನೆಗಾಗಿ ಒಂದು ಕೊಡ ನೀರು, ಅಭಿಷೇಕಕ್ಕಾಗಿ ನಾಲ್ಕುಕೊಡ ನೀರು, ನೈವೇದ್ಯಕ್ಕಾಗಿ ಒಂದುಕೊಡ ನೀರು – ಹೀಗೆ ಒಟ್ಟು ಆರು ಕೊಡ ನೀರು ಪ್ರತ್ತಿನಿತ್ಯದ ಪೂಜೆಗೆ ಅತ್ಯಾವಶಕ. ದೊಡ್ಡ ಗಾತ್ರದ ಕೊಡವನ್ನು ತಲೆಯಲ್ಲಿ ಹೊತ್ತುಕೊಂಡು ಮೇಲೇರಲಾಗುವುದು. ರೂಢಿಯಾದ ವ್ಯಕ್ತಿಗೆ ದುರ್ಗಾಲಯದಿಂದ ಕೆಳಗಿಳಿದು ಒಂದು ದೊಡ್ಡ ಕೊಡ ನೀರನ್ನು ಮೇಲೆ ಒಯ್ಯುವುದಕ್ಕೆ ಸುಮಾರು ಎಂಟು ನಿಮಿಷಗಳು ಬೇಕಾಗುವವು.
ಹೀಗೆ ಕೆಳಗಿನಿಂದ ನೀರನ್ನು ಒಯ್ಯುವುದು ಇಲ್ಲಿಯ ಒಂದು ಸಾಹಸದ ಚಟುವಟಿಕೆಯೇ ಸರಿ.

ಧಾರ್ಮಿಕ ಆಚರಣೆಗಳು

News and Event Archives

January 2018
M T W T F S S
« May    
1234567
891011121314
15161718192021
22232425262728
293031  
Highslide for Wordpress Plugin