ಗೋ ಸೇವೆಗೆ ಅವಕಾಶ

ಚಿತ್ರ ಭಂಡಾರ

ಸೇವೆ / ದೇಣಿಗೆ

ಯೋಗಮಾಯ ರೂಪ

ಪ್ರಕೃತಿಯ ತಮೋಗುಣವನ್ನು ನಿಯಂತ್ರಿಸುವ ಲಕ್ಷ್ಮೀದೇವಿಯ ರೂಪವೇ `ದುರ್ಗಾ’  ಭಗವಂತನು ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನಾಗಿ ಅವತರಿಸಿದಾಗ ದುರ್ಗಾದೇವಿ ಭಗವಂತನ ಆದೇಶಾನುಸಾರವಾಗಿ `ಯೋಗಮಾಯಾ’  ಎಂಬ ರೂಪವನ್ನು ತಾಳಿದ್ದಳು. ದೇವಕಿಯ ಗರ್ಭದಲ್ಲಿ ಮೂರುತಿಂಗಳು ಇದ್ದ ಶೇಷನನ್ನು ರೋಹಿಣಿಯ ಗರ್ಭಕ್ಕೆ ವರ್ಗಾಯಿಸಿದ್ದ ಯೋಗ ಮಾಯೆ, ಭಗವಂತನು ದೇವಕಿಯಲ್ಲಿ ಕೃಷ್ಣನಾಗಿ ಅವತರಿಸಲು ನಂದಗೋಪನ ಪತ್ನಿ ಯಶೋದೆಯಲ್ಲಿ ದುರ್ಗಿಯಾಗಿ ತಾನೂ ಅವತರಿಸಿದ್ದಳು. ವಸುದೇವನು ಬಾಲಕೃಷ್ಣನನ್ನು ಕಾರಾಗೃಹದಿಂದ ನಂದವ್ರಜಕ್ಕೆ ಕೊಂಡೊಯ್ಯಲು ತೊಡಗಿದಾಗ ಕಂಸನ ಕಾವಲುಗಾರರೆಲ್ಲ ನಿದ್ರೆಗೊಳಗಾಗುವಂತೆ ಮಾಡಿದ್ದ ಯೋಗಮಾಯೆ ನಂದವ್ರಜದಿಂದ ದೇವಕಿಯಲ್ಲಿಗೆ ವಸುದೇವನಿಂದ ತರಲ್ಪಟ್ಟವಳಾಗಿ ಅದುವರೆಗೆ ನಿದ್ರೆಗೊಳಗಾಗಿದ್ದ ಕಂಸನ ಭೃತ್ಯರೆಲ್ಲ ಎಚ್ಚೆತ್ತುಕೊಳ್ಳುವಂತೆ ಧ್ವನಿ ಮಾಡಿದ್ದಳು. ನಿರ್ದಯನಾದ ಕಂಸ ಅವಳನ್ನು ಶಿಲೆಯ ಮೇಲೆ ಅಪ್ಪಳಿಸಬೇಕೆಂದಾಗ, ಅವನ ಕೈಯಿಂದ ತಪ್ಪಿಸಿಕೊಂಡು ಆಗಸದ ಮೇಲೆ ಏರಿದ್ದಳು. ಅಷ್ಟಭುಜಗಳ ಅಲೌಕಿಕ ರೂಪಧಾರಿಣಿಯಾಗಿ ಕಂಸನ ಶತ್ರು ಬೇರೊಂದೆಡೆ ಬೆಳೆಯುತ್ತಿದ್ದಾನೆಂದು ಎಚ್ಚರಿಸಿ ಅದೃಶ್ಯಳಾಗಿದ್ದಳು. ಮರೀಚಿಯ ಆರು ಮಕ್ಕಳು ದೇವಲರ ಶಾಪಕ್ಕೊಳಗಾಗಿ ಅಸುರಜನ್ಮವನ್ನು ಹೊಂದಿದವರಾಗಿ, ಚತುರ್ಮುಖನ ವರ ಹಾಗೂ ಹಿರಣ್ಯಕಶಿಪುವಿನ ಶಾಪಗಳಿಗನುಗುಣವಾಗಿ ಹತ್ತತ್ತು ತಿಂಗಳು ದೇವಕಿಯ ಗರ್ಭದಲ್ಲಿ ಬೆಳೆದು, ಕಂಸನಿಂದ ಕೊಲ್ಲಲ್ಪಟ್ಟವರಾಗಿ ಪುನಃ ಸುತಲದಲ್ಲಿ ಸುರಕ್ಷಿತವಾಗಿರಿಸಲ್ಪಟ್ಟಿದ್ದ ತಮ್ಮ ತಮ್ಮ ಹಿಂದಿನ ದೇಹದಲ್ಲಿ ಸೇರಿಕೊಳ್ಳುವಂತೆ ಮಾಡುವಲ್ಲಿಯೂ ಯೋಗಮಾಯೆ ತನ್ನ ಮಾಯೆಯನ್ನು ಮೆರೆದಳು.

ಹೀಗೆ ಕೃಷ್ಣಾವತಾರದ ಸಂದರ್ಭದಲ್ಲಿ ಶ್ರೀಕೃಷ್ಣನ ಅನುಜೆಯಾಗಿ ಅವನ ದುಷ್ಟಸಂಹಾರ ಹಾಗೂ ಶಿಷ್ಟಪರಿಪಾಲನ ಕಾರ್ಯಗಳಲ್ಲಿ ಸಹಭಾಗಿಯಾದ  `ಯೋಗಮಾಯೆ’ ಯೇ ಕುಂಜಾರುಬೆಟ್ಟದ ದುರ್ಗಾಲಯದಲ್ಲಿ ವಿರಾಜಿಸುತ್ತಿರುವಳು. ಈ ಬಗ್ಗೆ ಗ್ರಾಂಥಿಕ ಉಲ್ಲೇಖ ದೊರಕುವುದಿಲ್ಲವಾದರೂ ಪ್ರಬಲವಾದ ಐತಿಹ್ಯ ಇದೆ.

ಧಾರ್ಮಿಕ ಆಚರಣೆಗಳು

News and Event Archives

January 2018
M T W T F S S
« May    
1234567
891011121314
15161718192021
22232425262728
293031  
Highslide for Wordpress Plugin