ಗೋ ಸೇವೆಗೆ ಅವಕಾಶ

ಚಿತ್ರ ಭಂಡಾರ

ಸೇವೆ / ದೇಣಿಗೆ

ದುರ್ಗಾಲಯದ ವ್ಯಾಪ್ತಿ

ಕುಂಜರುಗಿರಿಯ ದುರ್ಗಾಲಯ  ‘ಬಳಿಸಾಗರ ಮಾಗಣೆ’ಯ  ದೇವಸ್ಥಾನ ಎನಿಸಿದ್ದು, ಹನ್ನೆರಡು ಮಾಗಣೆಗಳ ಭಕ್ತರನ್ನು ಹೊಂದಿರುವಷ್ಟು ವ್ಯಾಪಕವೆನಿಸಿದೆ. ಕನ್ನರಾಡಿ, ಉಂಡಾರು, ಇನ್ನಂಜೆ, ಕಲ್ಮಂಜೆ, ಪಳ್ಳಿ, ಬೆಳ್ಳೆ, ಬಿಳ್ಯಾರು, ಪಾಜೈ – ಮುಂತಾದ ಊರುಗಳಿಂದೆಲ್ಲ ಭಕ್ತರು ಈ ದುರ್ಗಾಲಯಕ್ಕೆ ಬರುತ್ತಿರುತ್ತಾರೆ.

ಪರಶುರಾಮನಿಂದ ಪ್ರತಿಷ್ಠಿತಳಾಗಿರುವ ಇಲ್ಲಿಯ ದೇವಿ ಪರಶುರಾಮನ ತಂದೆ ಜಮದಗ್ನಿ ಋಷಿ ಸಂಬಂಧಿಸಿದ ಗೋತ್ರದವರಿಗೆಲ್ಲ ಕುಲದೇವತೆಯಾಗಿರುವಳು. ಕುಂದಾಪುರದ ಐತಾಳರು, ಅಡಿಗರು, ಶಾಸ್ತ್ರಿಗಳು, ಸೋಮಯಾಜಿಗಳು ಕುಂಜಾರಿನ ದುರ್ಗೆಯನ್ನೇ ಕುಲದೇವತೆಯನ್ನಾಗಿ ಹೊಂದಿದ ಮತ್ತೆ ಕೆಲವರು.

ಉಡುಪಿಗೂ ಕುಂಜಾರಿಗೂ ವಿಶಿಷ್ಠವಾದ ನಂಟು. ಉಡುಪಿ ಶ್ರೀ ಕೃಷ್ಣನ ಸಂದರ್ಶನಕ್ಕೆ ಬಂದ ಹೆಚ್ಚಿನ ಯಾತ್ರಿಕರು ಕುಂಜಾರಿನ ದುರ್ಗೆಯ ದರ್ಶನ ಪಡೆಯದೆ ಇರುವುದಿಲ್ಲ.

ಉಡುಪಿ ಶ್ರೀಕೃಷ್ಣನ ಪೂಜೆಯ ಪರ್ಯಾಯ ಪೀಠವನ್ನೇರಲಿರುವ ಶ್ರೀಪಾದರು ಪರ್ಯಾಯ ಪೀಠಾರೋಹಣಕ್ಕಿಂತ ಮುಂಚೆ ಸಂದರ್ಶಿಸಬೇಕೆಂದಿರುವ ಅನೇಕ ದೇವಾಲಯಗಳಲ್ಲಿ ಕುಂಜಾರಿನ ದುರ್ಗಾಲಯವೂ ಒಂದು. ಕುಂಜಾರಿನ ದುರ್ಗೆಯ ಸಂದರ್ಶನ ಪಡೆದು ಮುಂದೆ ತಮ್ಮ ಪರ್ಯಾಯಾವಧಿಯಲ್ಲಿ ಯಾವುದೇ ಬಗೆಯ ಅನಿಷ್ಟ ಸಂಭವಿಸದಂತೆ ಪ್ರಾರ್ಥಿಸಿಕೊಳ್ಳುವುದು ನಡೆದುಬಂದಿರುವ ಸಂಪ್ರದಾಯ.

ಕುಂಜಾರಿನ ಸುತ್ತಮುತ್ತಲ ಊರುಗಳಾದ ಅಚ್ಚಡ, ಬಿಳಿಯಾರು, ಬೆಳ್ಳೆ, ಎಡನೀರು, ಪಾಚೈ, ಕುರ್ಕಾಲು – ಇವುಗಳಲ್ಲಿ ಭೂತಗಳ ಕೋಲ ನಡೆಯಬೇಕಾದರೆ ಅದರ ಅಂಗವಾಗಿ ಕುಂಜಾರಿನ ದುರ್ಗಾಲಯದಲ್ಲಿ ಸಮಾರಾಧನೆ ನಡೆಯಲೇ ಬೇಕೆಂಬುದು ಆಯಾ ಊರುಗಳಿಗೆ ಈ ದುರ್ಗಾಲಯದ ಜೊತೆಗೆ ಇರುವ ಗಾಢವಾದ ನಂಟನ್ನು ಸಾರುತ್ತಿದೆ.

ಹೀಗೆ ಕುಂಜಾರಿನ ದುರ್ಗಾಲಯ ವಿವಿಧ ಬಗೆಯ ವೈಶಿಷ್ಟ್ಯದಿಂದಾಗಿ ಅಸಾಧಾರಣ ವೈಭವದಿಂದ ಮೆರೆಯುತ್ತಿದೆ.

ವರವಿಮಾನಗಿರಾವಪಿ ಚಂಡಿಕಾ ಶಿಶುಮಹೋ ಜನನೀ ತಮಲಾಲಯತ್ |
ಅಪರಥಾ ಪರಿತುಷ್ಟಮನಾಃ ಕಥಂ ಚಿರಮಿಹೈವ ವಸೇದ್ವಿಸಹಾಯಕಃ ||
– ಸುಮಧ್ವಿವಿಜಯ
ಬೆಟ್ಟದ ಮೇಲೆ ಇರುವ ದುರ್ಗೆಯು ಬಾಲಕನಾದ ವಾಸುದೇವನನ್ನು (ಮಧ್ವರನ್ನು) ರಕ್ಷಿಸುತ್ತಿದ್ದಳು. ಆಲ್ಲದಿದ್ದರೆ ಈ ಮಗು ಹೇಗೆ ತಾನೆ ನೆಮ್ಮದಿಯಿಂದ ಇದ್ದೀತು? ತಾಯಿಯಾದ ದುರ್ಗೆಯೇ ಈ ವಾಸುದೇವನನ್ನು ರಕ್ಷಿಸುತ್ತಿದ್ದಳು ಎಂಬ ಅಭಿಪ್ರಾಯ.
ಪರಶ್ವಧಧನುರ್ಬಾಣ ಗದಾತೀರ್ಥೋಪಶೋಭಿತೇ|
ಗಿರೌ ಯತ್ರ ಸುತಪ್ರೇಮ್ಣೇವ ಆಸ್ತೇ ನಿತ್ಯಂ ಹರಿಸ್ವಸಾ ||

-ತೀರ್ಥಪ್ರಬಂಧ

ಕೊಡಲಿ, ಧನಸ್ಸು, ಬಾಣ, ಗದೆಗಳೆಂಬ ತೀರ್ಥಗಳಿಂದ ಶೋಭಿತವಾದ ಈ ಬೆಟ್ಟದಲ್ಲಿ ದುರ್ಗೆಯು ತನ್ನ ಮಗನಾದ ವಾಸುದೇವನಲ್ಲಿ (ಮಧ್ವರಲ್ಲಿ) ಪ್ರೀತಿಯಿಂದಲೋ ಎಂಬಂತೆ ನೆಲೆಸಿದ್ದಾಳೆ.

ಧಾರ್ಮಿಕ ಆಚರಣೆಗಳು

News and Event Archives

January 2018
M T W T F S S
« May    
1234567
891011121314
15161718192021
22232425262728
293031  
Highslide for Wordpress Plugin