ಗೋ ಸೇವೆಗೆ ಅವಕಾಶ

ಚಿತ್ರ ಭಂಡಾರ

ಸೇವೆ / ದೇಣಿಗೆ

ಆಡಳಿತ ಮತ್ತು ಪೂಜೆ

ಕುಂಜಿತ್ತಾಯ ವಂಶದ ಎರಡು ಕುಟುಂಬಗಳಿಗೆ ಸೇರಿದ ಅರ್ಚಕರು ಇಲ್ಲಿಯ ಪೂಜೆಯಯನ್ನು    ನೆಡೆಸಿಕೊಂಡುತ್ತಿರುವರು. ಸಂಕ್ರಮಣವನ್ನೇ ಗಡುವಾಗಿಟ್ಟುಕೊಂಡು ಹದಿನೈದು ದಿನಗಳ ಅವಧಿಗೊಮ್ಮೆ ಒಂದೊಂದು ಕುಟುಂಬದವರು ಇಲ್ಲಿಯ ಪೂಜೆಯನ್ನು ನಿರ್ವಹಿಸುತ್ತಿರುತ್ತಾರೆ. ಪೂಜೆಯ ಹದಿನೈದು ದಿನಗಳ ರಾತ್ರಿ ಅವರು ದೇವಾಲಯದಲ್ಲಿಯೇ ತಂಗಿರಬೇಕು. ಬ್ರಹ್ಮಚರ್ಯದಲ್ಲಿದ್ದುಕೊಂಡು ದೇವಿಯ ಪೂಜೆಯನ್ನು ನಡೆಸಬೇಕೆಂಬುದು ಈ ವ್ಯವಸ್ಥೆಯ ಆಂತರ್ಯ.

ಆಡಳಿತವನ್ನು ನಡೆಸುವ ಉಡುಪಿ ಶ್ರೀ ಅದಮಾರು ಮಠಕ್ಕೂ, ಈ ದುರ್ಗಾಲಯಕ್ಕೂ ಇರುವ ಆಧ್ಯಾತ್ಮಿಕ  ನಂಟನ್ನು ಸಾರುವ ಒಂದು ಸ್ವಾರಸ್ಯಕರವಾದ ಆಚರಣೆಯನ್ನು  ’ಶರನ್ನವರಾತ್ರಿ’ ಯ ಅವಧಿಯಲ್ಲಿ ನಡೆಸಲಾಗುವುದು. ಅದಮಾರು ಮಠದ ಉಪಾಸ್ಯಮೂರ್ತಿ ಕಾಲೀಯಮರ್ದನ ಕೃಷ್ಣ. ಈ ಮಠದ ಶ್ರೀಪಾದರು ತಮ್ಮ ಆರಾಧ್ಯಮೂರ್ತಿಯೊಂದಿಗೆ ’ಶರನ್ನವರಾತ್ರಿ’ಯ ಒಂದು ರಾತ್ರಿಯಂದು ಇಲ್ಲಿಗೆ ಬರಬೇಕು. ಕಾಲೀಯಮರ್ದನ ಕೃಷ್ಣನ ಮಹಾಪೂಜೆ ಇಲ್ಲಿ ನಡೆಯಬೇಕು. ಬಳಿಕ ಸ್ವಲ್ಪ ಹೊತ್ತು ಕಾಲೀಯಮರ್ದನ ಶ್ರೀ ಕೃಷ್ಣನನ್ನು ಇಲ್ಲಿ ಆರಾಧ್ಯಳಾದ ದುರ್ಗಾದೇವಿಯ ಜೊತೆಗೆ  ’ಏಕಾಂತ’ದಲ್ಲಿ ಇಡಬೇಕು. ಅವರಿಬ್ಬರ ಸಮಾಗಮ ವೈಭವದ ಅನುಸಂಧಾನವನ್ನು ತಂದುಕೊಳ್ಳಬೇಕು.’ಸ್ವರತ’ ನಾಗಿರುವ ಭಗವಂತನು ಭಕ್ತವಾತ್ಸಲ್ಯಕ್ಕೊಳಗಾಗಿ ಭಕ್ತೋತ್ತಮಳಾದ ದುರ್ಗಾದೇವಿಗೆ ರತಿಸುಖವನ್ನು ಅನುಗ್ರಹಿಸುವನೆಂದು ವಿಶ್ಲೇಷಿಸಿಕೊಳ್ಳುವುದಕ್ಕೆ ಪುಷ್ಟಿ ನೀಡುವ ಕ್ರಮ ಅದಾಗಿದೆ.

ದಕ್ಷಿಣಕರ್ನಾಟಕದ ಹೆಚ್ಚಿನ ದೇವಾಲಯಗಳಲ್ಲಿರುವಂತೆ ಆಗಮಶಾಸ್ತ್ರಕ್ಕನುಗುಣವಾಗಿಯೇ ಇಲ್ಲಿಯ ಪೂಜೆ ಪುರಸ್ಕಾರದಿಗಳು ನೆಡೆಯುವವಾದರೂ ಉಡುಪಿ ಶ್ರೀ ಅದಮಾರು ಮಠದ ಸಂಪರ್ಕದಿಂದಾಗಿ ದುರ್ಗೆಯ ಅಂತರ್ಯಾಮಿಯಾಗಿರುವ ಲಕ್ಷ್ಮೀನಾರಾಯಣನನ್ನು ಗಮನದಲ್ಲಿಟ್ಟುಕೊಂಡೇ ದುರ್ಗೆಗೆ ಪೂಜೆ ಪುರಸ್ಕರಾದಿಗಳನ್ನು ಸಮರ್ಪಿಸುವ ಪದ್ಧತಿ ರೂಢಿಯಲ್ಲಿದೆ. ಬಾಣತೀರ್ಥದಲ್ಲಾಗಲೀ, ಗದಾತೀರ್ಥದಲ್ಲಾಗಲೀ ಮೃತ್ತಿಕಾ – ಗೋಮಯಸ್ನಾನ ಪೂರ್ವಕವಾದ ಅವಗಾಹನ ಸ್ನಾನ ನಡೆಸಿಯೇ ಇಲ್ಲಿಯ ದುರ್ಗೆಯ ಅರ್ಚನೆಗೆ ತೊಡಗಬೇಕು.  ಮಹಾಪೂಜೆಯವರೆಗೂ ಪೂಜೆಯನ್ನು ನಡೆಸುವ ಅರ್ಚಕರಾಗಲೀ, ನೈವೇಧ್ಯವನ್ನು ತಯಾರಿಸುವ `ಕೀಳುಶಾಂತಿ’ಯವರಾಗಲೀ, ನೀರು ತರುವ ’ಉದಕಶಾಂತಿ’ ಯವರಾಗಲೀ ಏನೂ ಆಹಾರವನ್ನು ಸ್ವೀಕರಿಸದೇ ಉಪವಾಸದಿಂದಿರಬೇಕು.

ಧಾರ್ಮಿಕ ಆಚರಣೆಗಳು

News and Event Archives

January 2018
M T W T F S S
« May    
1234567
891011121314
15161718192021
22232425262728
293031  
Highslide for Wordpress Plugin